Hon'ble Shri. Thaawarchand Gehlot
Governor of Karnataka and Chancellor of Universities
ಸನ್ಮಾನ್ಯ ಶ್ರೀ ಥಾವರಚಂದ್ ಗೆಹ್ಲೋಟ್ ಪರಿಚಯ
ಸನ್ಮಾನ್ಯ ಶ್ರೀ ಥಾವರಚಂದ್ ಗೆಹ್ಲೋಟ್ ರವರು ಮಧ್ಯಪ್ರದೇಶ ರಾಜ್ಯದ ಉಜ್ಜಯಿನಿ ಜಿಲ್ಲೆಯ ರುಪೇಟಾ ಎಂಬ ಹಳ್ಳಿಯಲ್ಲಿ 1948, ಮೇ 18 ರಂದು ಜನಿಸಿದರು. ಶ್ರೀಯುತರು ತಮ್ಮ ಬಿ. ಎ. ಪದವಿಯನ್ನು ಉಜ್ಜಯಿನಿಯ ವಿಕ್ರಮ ವಿಶ್ವವಿದ್ಯಾಲಯದಲ್ಲಿ ಮುಗಿಸಿ ತಮ್ಮ ರಾಜಕೀಯ ಜೀವನವನ್ನು ವಿದ್ಯಾರ್ಥಿ ನಾಯಕರಾಗಿ ಪ್ರಾರಂಭಿಸಿದರು. ಶ್ರೀ ಥಾವರಚಂದ್ ಗೆಹ್ಲೋಟ್ಜಿ ಅವರಿಗೆ ಡಾ. ಬಿ. ಆರ್. ಅಂಬೇಡ್ಕರ್ ಸಾಮಾಜಿಕ ವಿಜ್ಞಾನಗಳ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಾದ ಶ್ರೀ ಥಾವರಚಂದ್ ಗೆಹ್ಲೋಟ್ಜಿಯವರು ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ವಿದ್ಯಾರ್ಥಿ ನಾಯಕರಾಗಿದ್ದ ಇವರು ಮಧ್ಯಪ್ರದೇಶ ವಿಧಾನ ಸಭೆಗೆ ಮೂರು ಬಾರಿ ಆಯ್ಕೆಯಾಗುವ ಮೂಲಕ ಯಶಸ್ಸಿನ ಮೆಟ್ಟಲೇರಿದವರು. ಮಧ್ಯಪ್ರದೇಶದ ಮಂತ್ರಿಮಂಡಲದಲ್ಲಿ 1990-1992ರ ವರೆಗೆ ಜಲಸಂಪನ್ಮೂಲ, ನರ್ಮದಾ ಕಣಿವೆ ಅಭಿವೃದ್ಧಿ, ಪಂಚಾಯತ ಮತ್ತು ಗ್ರಾಮೀಣಾಭಿವೃದ್ಧಿ, ಅಂತ್ಯೋದಯ ಕಾರ್ಯಕ್ರಮ ಮತ್ತು 20 ಅಂಶಗಳ ಕಾರ್ಯಕ್ರಮ ಅನುಷ್ಠಾನದ ರಾಜ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಶ್ರೀಯುತರು 1996 ಮತ್ತು 2009 ರ ನಡುವೆ ಶಾಜಾಪೂರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಪ್ರತಿನಿಧಿಸಿದ್ದರು. ಶ್ರೀಯುತರು 1996 ಮತ್ತು 1999 ರಲ್ಲಿ ಕೃಷಿ ಸಮಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯುದಯ ಸಮಿತಿ, ಕಾರ್ಮಿಕ ಸಚಿವಾಲಯದ ಸಲಹಾ ಸಮಿತಿಯ ಸದಸ್ಯ ಹುದ್ದೆಗಳನ್ನು ನಿರ್ವಹಿಸಿರುತ್ತಾರೆ. ಸನ್ಮಾನ್ಯರು 2000 ರಿಂದ 2001ರ ಅವಧಿಯಲ್ಲಿ ಮಹಿಳಾ ಸಬಲೀಕರಣ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದರು. ಅಲ್ಲದೇ, ಶ್ರೀಯುತರು 2013ರಲ್ಲಿ ಮಧ್ಯ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಮೇ 2014 ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಶ್ರೀಯುತರು ಮಧ್ಯಪ್ರದೇಶದ ವಿಧಾನ ಸಭೆಯಿಂದ ಪ್ರಕಟವಾಗುವ “ವಿಧಾಯನಿ” ನಿಯತಕಾಲಿಕಕ್ಕೆ ಬರೆಯುತ್ತಿರುವ ಲೇಖನಗಳು ಅವರ ಸಾಹಿತ್ಯಾಭಿರುಚಿಯನ್ನು ಬಿಂಬಿಸುತ್ತದೆ. ಶ್ರೀಯುತರು ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗಾಗಿ “ಬಲಾಯಿ ಸಮಾಜ” ಎಂಬ ಸಂಸ್ಥೆಯ ಮೂಲಕ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಸನ್ಮಾನ್ಯರು 6 ಜುಲೈ 2021 ರಂದು ಕರ್ನಾಟಕ ರಾಜ್ಯದ 19ನೇ ರಾಜ್ಯಪಾಲರಾಗಿ ನೇಮಕಗೊಂಡಿರುತ್ತಾರೆ.
Shri. Thaawarchand Gehlotji
The Hon’ble Governor of Karnataka Shri. Thaawarchand Gehlotji was born on 18th May 1948 in Rupeta village which is located in Ujjain district of Madhya Pradesh. Shri. Gehlotji completed his B.A. from Vikram University, Ujjain, Madhya Pradesh. Dr. B. R. Ambedkar University of Social Sciences has awarded Honorary Doctorate to Shri. Thaawarchand Gehlotji. He was always interested in political line since childhood and started his political career as a student leader. As a party loyalist, Gehlotji has occupied various positions in the party. Moving a step higher in the ladder of success from being a student leader, he was elected to the legislative assembly of Madhya Pradesh thrice. From 1990 to 1992, he was the Minister of State, (Water Resources) and instrumental in Narmada Valley Development, Panchayat and Rural Development, Antyodaya Programme and implementation of 20-Point Programme in Madhya Pradesh. He represented the Shajapur constituency as Member of Parliament between 1996 and 2009. He also held the positions of member of Committee on Agriculture, member of Committee on the Welfare of Scheduled Castes and Scheduled Tribes, member of Consultative Committee, Ministry of Labour in 1996 and 1999. From 2000 to 2001 he was appointed as the member of Committee on the Empowerment of Women and a member of Consultative Committee, Ministry of External Affairs. He had held the post of minister several times in the central government. In the year 2013, Gehlotji was elected as the member of the Rajya Sabha from Madhya Pradesh. In May 2014, he took oath as the Minister of Social Justice and Empowerment. Gehlot ji’s literary interests are prominent in the articles contributed by him for ‘Vidhayani’, a quarterly journal published by the legislative assembly of Madhya Pradesh. Gehlot ji works for the exploited classes through the organisation called ‘Balai Samaj’. On July 6, 2021, Thaawarchand Gehlotji was appointed as the 19th Governor of Karnataka.